ಆಟಿ ಅಮಾವಾಸ್ಯೆಯ ವಿಶೇಷ ‘ಪಾಲೆದ ಕೆತ್ತೆದ ಕಷಾಯ’ ದ ಮಹತ್ವ..!!

aati amavashyeya vishesha paleda ketteda kashayada mahatva-naadle
Share This:

ತುಳುನಾಡಿನ ಜನರು ಆಟಿ ಅಮಾವಾಸ್ಯೆಯನ್ನು ವಿಶೇಷವಾಗಿ ಹಾಲೆ ಮರದ ಕಷಾಯ ಕುಡಿಯುವ ಮೂಲಕ ಆಚರಿಸುತ್ತಾರೆ. ಆಟಿ ತಿಂಗಳಿನಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಟಿ ಅಮಾವಾಸ್ಯೆ ದಿನದಂದು ಸಾಮೂಹಿಕವಾಗಿ ಕಷಾಯ ಸೇವಿಸುವ ಪದ್ಧತಿ ಬೆಳೆದು ಬಂದಿದೆ. ಈ ಕಷಾಯದ ಔಷಧೀಯ ಉಪಯೋಗದಿಂದ ಇದು ಜಾನಪದ ಔಷಧಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.aati amavashyeya vishesha paleda ketteda kashayada mahatva-naadle

Upcoming and Ongoing events

View More Events

Want to Promote your Event, contact Naadle at 9035030300 or Email us at [email protected]


ಹಾಲೆ ಮರದ ತೊಗಟೆಯನ್ನು ತೆಗೆದು ಅದನ್ನು ಜಜ್ಜಿ ಕಷಾಯ ತಯಾರಿಸಲಾಗುತ್ತದೆ. ಕಹಿಯಾದ ಈ ಕಷಾಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಜನರ ನಂಬಿಕೆ. ವೈದ್ಯರು ಸಹ ಇದನ್ನು ಒಪ್ಪುತ್ತಾರೆ. ಹಾಲೆ ಮರದ ಎಲೆಯು ಸಾಮಾನ್ಯವಾಗಿ ದಪ್ಪವಾಗಿದ್ದು ಒಂದು ಗೊಂಚಲಿನಲ್ಲಿ 7 ರಿಂದ 9 ಪತ್ರಗಳಿರುತ್ತವೆ. ಎಲೆಗಳ ಅಗಲ ಒಂದರಿಂದ ಎರಡು ಇಂಚು ಇದ್ದು, ಉದ್ದ 6 ರಿಂದ 12ಇಂಚು ಇರುತ್ತದೆ.aati amavashyeya vishesha paleda ketteda kashayada mahatva-naadleಬೆಳ್ಳಂಬೆಳಗ್ಗೆ ಅಂದರೆ ಸೂರ‌್ಯೋದಯಕ್ಕೆ ಮೊದಲೇ ಒಂದು ಚೂಪಾದ ಕಲ್ಲಿನಿಂದ ಮರದ ತೊಗಟೆಯನ್ನು ತೆಗೆದು ಯಾವುದೇ ರೀತಿಯ ಕಬ್ಬಿಣದ ವಸ್ತುವನ್ನು ತಾಗಿಸದೆ ಮನೆಗೆ ತರಬೇಕು. ಮನೆಯಲ್ಲಿ ತೊಗಟೆಯನ್ನು ಚೆನ್ನಾಗಿ ಗುದ್ದಿ ರಸ ತೆಗೆಯಬೇಕು, ಜೀರಿಗೆ, ಬೆಳ್ಳುಳ್ಳಿ ಮತ್ತು ಕಾಳುಮೆಣಸನ್ನು ಕಷಾಯಕ್ಕೆ ಸೇರಿಸಲಾಗುತ್ತದೆ ನಂತರ ಬೊಳ್ಳುಕಲ್ಲನ್ನು (ಬಿಳಿಕಲ್ಲು) ಬೆಂಕಿಯಲ್ಲಿ ಕಾಯಿಸಿ ಚೆನ್ನಾಗಿ ಕಾದ ಮೇಲೆ ಕಷಾಯಕ್ಕೆ ಮುಳುಗಿಸಿ ತೆಗೆಯಬೇಕು. ಈ ಪ್ರಕ್ರಿಯೆಗೆ ತುಳುವಿನಲ್ಲಿ ಅಡ್ಡದೀಪಿನಿ ಎಂದು ಹೇಳಲಾಗುತ್ತದೆ. ಈ ಕಷಾಯವನ್ನು ಕುಡಿಯುವುದರಿಂದ ಶೀತ ವಾತಾವಾರಣವನ್ನು ತಡೆದುಕೊಳ್ಳುವ ಶಕ್ತಿ ಬರುತ್ತದೆ ಹುಳ ಬಾಧೆಯಿಂದ ಜೀರ್ಣಾಂಗವ್ಯೂಹವನ್ನು ಶುದ್ಧಗೊಳಿಸುತ್ತದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at [email protected]