Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

38 ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ವಿವಿ ಕುಲಪತಿ ಪಟ್ಟ..!!

38 varshagala ithihasadalli modalabaarige avibhagitha dakshina kannada jillege kulapati patta-naadle
Share This:

ಮಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಪ್ರೊ.ಪಿ.ಸುಬ್ರಮಣ್ಯ ಯಡಪಡಿತ್ತಾಯ ಸೋಮವಾರ ಅಧಿಕಾರ ಸ್ವೀಕರಿಸಿದರು. ಮಂಗಳೂರು ವಿವಿಯಲ್ಲಿ ಹಣಕಾಸು ಅಧಿಕಾರಿಯಾಗಿ, ಪರೀಕ್ಷಾಂಗ ಕುಲಸಚಿವ ಮತ್ತು ಕುಲಸಚಿವರಾಗಿ ಸೇವೆ ಸಲ್ಲಿರುವ ಇವರು, ಅಧ್ಯಾಪನ ಮತ್ತು ಆಡಳಿತದಲ್ಲಿ ಸಾಕಷ್ಟು ಅನುಭವಿಯಾಗಿದ್ದಾರೆ. ವಿ.ವಿ.ಯ 38 ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಈ ಗೌರವ ದೊರೆಯುತ್ತಿದೆ. ಇಲ್ಲಿವರೆಗೆ ಕುಲಪತಿಯಾಗಿ ಕಾರ್ಯನಿರ್ವಹಿಸಿದ ಎಲ್ಲ ಎಂಟು ಮಂದಿ ಹೊರ ಜಿಲ್ಲೆಯವರಾಗಿದ್ದರು.38 varshagala ithihasadalli modalabaarige avibhagitha dakshina kannada jillege kulapati patta-naadle

Upcoming and Ongoing events

View More Events

Want to Promote your Event, contact Naadle at 7090787344 or Email us at info@naadle.com


ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮ ಕೊಕ್ಕಡದ ಪಾಲಾಲೆ ಎಂಬಲ್ಲಿ ಕೃಷಿಕ ಅರ್ಚಕ ಕುಟುಂಬದ ನಾರಾಯಣ್‌ ಯಡಪಡಿತ್ತಾಯ ಮತ್ತು ಭವಾನಿ ದಂಪತಿಯ ಪುತ್ರರಾಗಿರುವ ಇವರು, ಕೊಕ್ಕಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷ ಣ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷ ಣ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪದವಿ ಪೂರ್ವ ಮತ್ತು ಪದವಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಪ್ರಪ್ರಥಮ ಬ್ಯಾಚ್‌ನಲ್ಲಿ ಪ್ರಥಮ ರಾಂಕ್‌ ಮತ್ತು ಮಂಗಳೂರು ಪಯನೀರ್ಸ್‌ ಚಿನ್ನದ ಪದಕದೊಂದಿಗೆ ಎಂಕಾಂ ಪದವಿ ಪಡೆದಿದ್ದಾರೆ. 1992ರಲ್ಲಿ ಮಂಗಳೂರು ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಬಳಿಕ ಸುಮಾರು ನಾಲ್ಕು ತಿಂಗಳುಗಳ ಕಾಲ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ತಾತ್ಕಾಲಿಕ ವಾಣಿಜ್ಯಶಾಸ್ತ್ರ ಶಿಕ್ಷಕರಾಗಿ ಬೋಧನೆ ಮಾಡಿದ್ದರು. 1982ರಿಂದ 1986ಜನವರಿವರೆಗೆ ಮಂಗಳಗಂಗೋತ್ರಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಭಾಗದಲ್ಲಿ ತಾತ್ಕಾಲಿಕ ಉಪನ್ಯಾಸಕರಾಗಿ ಸೇವೆ ಪ್ರಾರಂಭಿಸಿ ಕಾಯಂ ನೆಲೆಯಲ್ಲಿ ಉಪನ್ಯಾಸಕ, ರೀಡರ್‌ ಮತ್ತು ಪ್ರಾಧ್ಯಾಪಕರಾಗಿ ಸುಮಾರು 36ವರ್ಷಗಳ ಕಾಲ ಬೋಧನೆ, ಸಂಶೋಧನೆ, ಆಡಳಿತ ಕ್ಷೇತ್ರಗಳಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದಾರೆ.

ಮುಂಬಯಿಯ ಪ್ರತಿಷ್ಟಿತ ಎನ್‌ಐಟಿಐಇ ಸಂಸ್ಥೆಯಲ್ಲಿ 1994-95ರಲ್ಲಿ ಒಂದು ವರ್ಷಗಳ ಕಾಲ ಮಾನವ ಸಂಪನ್ಮೂಲ ನಿರ್ವಹಣೆ ಶಾಸ್ತ್ರದಲ್ಲಿ ಸಹ ಪ್ರಾಧ್ಯಾಪಕ ತರಬೇತುದಾರ ಮತ್ತು ವ್ಯವಹಾರ ಆಡಳಿತ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. ಇದುವರೆಗೆ 22ಸಂಶೋಧನಾ ವಿದ್ಯಾರ್ಥಿಗಳಿಗೆ ಮಾನವ ಸಂಪನ್ಮೂಲ ನಿರ್ವಹಣೆ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿರ್ವಹಣೆ ಕ್ಷೇತ್ರಗಳಲ್ಲಿ ಯಶಸ್ವಿ ಮಾರ್ಗದರ್ಶನ ನೀಡಿದ್ದಾರೆ. ಪರಿಸರ ಸ್ನೇಹಿ ಕ್ಯಾಂಪಸ್ ರೂಪಿಸುವುದು, ವಿಶ್ವವಿದ್ಯಾಲಯ ಮತ್ತು ಹಳ್ಳಿಗಳ ಜತೆ ಸಂಪರ್ಕ ಒದಗಿಸುವುದು ಸಹಿತ ಅನೇಕ ಯೋಜನೆಗಳನ್ನು ನನಸಾಗಿಸುವ ಕನಸನ್ನು ನೂತನ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಹೊಂದಿದ್ದಾರೆ.

Offers

Want to Add your Offers, contact Naadle at 7090787344 or Email us at info@naadle.com