2019 ‘ಲೋಕ’ಸಮರ ದಿನಾಂಕ ನಿಗದಿ: ಕರ್ನಾಟಕದಲ್ಲಿ ಏ.18, 23 ರಂದು ಚುನಾವಣೆ, ಮೇ.23ಕ್ಕೆ ಫಲಿತಾಂಶ..!!

2019-loka-samara-dinanka-nigadi-karnatakadalli-a-18,-a-23-randu-chunavane,-m-23kke-palithamsha-naadle
Share This:

ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದ ಮಹಾ ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 11ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು ಮೇ 23ರಂದು ಮತ ಎಣಿಕೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಭಾನುವಾರ ಪ್ರಕಟಿಸಿದ್ದಾರೆ. ಏ. ರಂದು 11 ಮೊದಲ ಹಂತದ ಮತದಾನ ನಡೆಯಲಿದೆ. ಏಪ್ರಿಲ್18 ರಂದು 2 ನೇ ಹಂತದ ಮತದಾನ, ಏ. 23 ರಂದು 3 ನೇ ಹಂತದ ಮತದಾನ, ಏ.29 ರಂದು 4 ನೇ ಹಂತದ ಮತದಾನ, ಮೇ.6 ರಂದು 5ನೇ ಹಂತ ಮೇ.12 ರಂದು 6ನೇ ಹಂತ ಮೇ.19 ರಂದು 7 ನೇ ಹಂತದ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಮಾ. 25 ಕಡೇ ದಿನವಾಗಿದ್ದರೆ, ವಾಪಸ್‌ ಪಡೆಯಲು ಮಾ. 28 ಅಂತಿಮ ದಿನವಾಗಿದೆ. ಕರ್ನಾಟಕದಲ್ಲಿ ಏಪ್ರಿಲ್‌ 18ರ ಎರಡನೇ ಹಂತದಲ್ಲಿ 14 ಕ್ಷೇತ್ರಗಳ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಮಾ. 26 ಕಡೇ ದಿನವಾಗಿದೆ. ನಾಮಪತ್ರ ವಾಪಸ್‌ ಪಡೆಯಲು ಮಾ. 29 ಅಂತಿಮ ದಿನವಾಗಿದೆ.2019-loka-samara-dinanka-nigadi-karnatakadalli-a-18,-a-23-randu-chunavane,-m-23kke-palithamsha-naadleರಾಜ್ಯದ 28 ಲೋಕಸಭಾ ಸ್ಥಾನಗಳ ಚುನಾವಣೆಗೆ ಏಪ್ರಿಲ್ 18 ಹಾಗೂ 23ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಒಟ್ಟು 58,186 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ತಿಳಿಸಿದರು. ರಾಜ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆಗಳ ವಿವರ ನೀಡಿದ ಅವರು, ಈ ಬಾರಿ ರಾಜ್ಯದಲ್ಲಿ ಸುಮಾರು 5.03 ಕೋಟಿ ಮತದಾರರು ಹಕ್ಕುಗಳನ್ನು ಚಲಾಯಿಸಲಿದ್ದಾರೆ ಎಂದು ಹೇಳಿದರು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 54,265 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಬಾರಿ ಮತಗಟ್ಟೆಗಳ ಸಂಖ್ಯೆ ಶೇ.7 ಹೆಚ್ಚಳವಾಗಿದೆ. ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಅಂಗವಿಕಲರಿಗೆ ಮತದಾನದ ದಿನದಂದು ಮತಗಟ್ಟೆಗೆ ಬರಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು. 2019ರ ಜನವರಿ 16ರಂದು ರಾಜ್ಯದಲ್ಲಿ ಘೋಷಿಸಲಾದ ಪರಿಷ್ಕೃತ ಮತದಾರರ ಪಟ್ಟಿಯಂತೆ 5.03 ಕೋಟಿ ಮತದಾರರಿದ್ದಾರೆ. ರಾಜ್ಯ ಚುನಾವಣಾಧಿಕಾರಿಗಳ ಕಚೇರಿಯ ವೆಬ್​ಸೈಟ್​ನಲ್ಲಿ ಇನ್ನು ಮುಂದೆ ಮತ ದಾರರ ನೋಂದಣಿಯನ್ನು ಸ್ಥಗಿತಗೊಳಿಸಿದ್ದು, ರಾಷ್ಟ್ರೀಯ ಪೋರ್ಟಲ್​ನಲ್ಲಿ ಮಾತ್ರ ಮಾ. 1ರಿಂದ ಮತದಾರರ ನೋಂದಣಿಗೆ ಅವಕಾಶ ನೀಡಲಾಗಿದೆ.