ಒಂದು ಕಡೆ ಹಸಿರು ಪಶ್ಚಿಮಘಟ್ಟಗಳ ಸಾಲು, ಇನ್ನೊಂದು ಕಡೆ ಉಕ್ಕೇರುವ ಅರಬ್ಬೀ ಸಮುದ್ರ, ಇವೆಲ್ಲದರ ನಡುವೆ ಜುಳು ಜುಳು ನಾದದಿಂದ ಶಾಂತವಾಗಿ ಹರಿಯುವ ಫಲ್ಗುಣಿ, ಶಾಂಭವಿ, ನೇತ್ರಾವತಿ ನದಿಗಳ ಪ್ರಕೃತಿದತ್ತವಾದ ಸುಂದರ ತಾಣ. ಪ್ರವಾಸೋದ್ಯಮ ಇಲಾಖೆಯು ಇಲ್ಲಿ ಮೊದಲ ಬಾರಿಗೆ ‘ರಿವರ್ ಫೆಸ್ಟಿವಲ್’ ನಡೆಸಲು ತೀರ್ಮಾನಿಸಿದೆ, ಈ ಹಿನ್ನೆಲೆಯಲ್ಲಿ ಕೂಳೂರು, ತಣ್ಣೀರುಬಾವಿ ಹಾಗೂ ಸುಲ್ತಾನ್ ಬತ್ತೇರಿ ನದಿ ತೀರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.
Upcoming and Ongoing events
Want to Promote your Event, contact Naadle at 7090787344 or Email us at [email protected]
ಈ ಹಿನ್ನೆಲೆಯಲ್ಲಿ ನದಿ ಉತ್ಸವದ ಲಾಂಛನವನ್ನು ಬಿಡುಗಡೆಗೊಳಿಸಲಾಗಿದೆ. ಜನವರಿ 12 ಮತ್ತು 13 ರಂದು ಈ ನದಿ ಉತ್ಸವವು ಜಿಲ್ಲೆಯ ಮೂರು ಕಿನಾರೆಗಳಲ್ಲಿ ನಡೆಯಲಿದೆ. ನದಿ ತೀರಗಳನ್ನು, ದ್ವೀಪಗಳನ್ನು ಹೊಂದಿರುವ ತಾಲೂಕು ಮಟ್ಟದಲ್ಲೂ ಉತ್ಸವಗಳನ್ನು ನಡೆಸಲು ಜಿಲ್ಲಾ ಮಟ್ಟದ ಕಾರ್ಯಕ್ರಮ ರೂಪಿಸಲಾಗಿದೆ. ಎರಡು ದಿನ ಮಟ್ಟಿಗೆ ಕೂಳೂರು, ತಣ್ಣೀರುಬಾವಿ ಹಾಗೂ ಸುಲ್ತಾನ್ ಬತ್ತೇರಿ ನದಿ ಕಿನಾರೆಯಲ್ಲಿ ಜಲ ಸಾಹಸ ಕ್ರೀಡೆಗಳು, ತೇಲುವ ಹೋಟೆಲ್, ರೆಸ್ಟೋರೆಂಟ್, ಫುಡ್ ಕೋರ್ಟ್, ನಾನಾ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನದಿಗಳ ಕುರಿತಾಗಿ ಚಿತ್ರೋತ್ಸವ ಕೂಡ ಇರುತ್ತದೆ.ಇದಕ್ಕಾಗಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ 30 ಲಕ್ಷ ರೂ. ಬಿಡುಗಡೆಯಾಗಿದೆ. ನದಿ ಉತ್ಸವಕ್ಕಾಗಿ ಬಂಗ್ರಕೂಳೂರಿನಲ್ಲಿರುವ 20 ಎಕರೆ ಸರಕಾರಿ ಭೂಮಿಯನ್ನು ಗುರುತಿಸಲಾಗಿದೆ. ಅಲ್ಲಿಗೆ ಸುಲ್ತಾನ್ ಬತ್ತೇರಿ, ತಣ್ಣೀರು ಬಾವಿ ಮತ್ತು ಕೂಳೂರಿನಿಂದ ಜೆಟ್ಟಿ ಮತ್ತು ದೋಣಿಗಳ ಮೂಲಕ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಗಿದೆ.
Offers
Want to Add your Offers, contact Naadle at 7090787344 or Email us at [email protected]