ಕೋಸ್ಟಲ್ ವುಡ್ ಇತಿಹಾಸದಲ್ಲಿ ಮೊದಲ ಬಾರಿಗೆ 5D ತಂತ್ರಜ್ಞಾನ ಇಲ್ಲೊಕ್ಕೆಲ್ ಸಿನಿಮಾದಲ್ಲಿ..!!

tulu chitrarangadalli modala barige 5d technology-naadle
Share This:

ತುಳು ಚಿತ್ರರಂಗದಲ್ಲಿಯೇ ಪ್ರಪ್ರಥಮ ಬಾರಿಗೆ 5D ತಂತ್ರಜ್ಞಾವನ್ನು ಉಪಯೋಗಿಸಿಕೊಂಡು ಇಲ್ಲೊಕ್ಕೆಲ್ ಚಿತ್ರವನ್ನು ನಿರ್ಮಿಸಲಾಗಿದೆ. 5D ತಂತ್ರಜ್ಞಾನದಲ್ಲಿ ಬಿನೌರಲ್ ರೆಕಾರ್ಡಿಂಗ್ಗಳು ಇವೆ. ಹೆಡ್ಫೋನ್ಗಳನ್ನು ಬಳಸಿಕೊಂಡು ನಾವು ಬೈನೌರಲ್ ರೆಕಾರ್ಡಿಂಗ್ ಅನ್ನು ಕೇಳಿದಾಗ, ನಾವು ವಿಶಿಷ್ಟವಾದ ಮತ್ತು ನಿಜವಾದ 360 ° ಶಬ್ದವನ್ನು ಗ್ರಹಿಸುತ್ತೇವೆ. ಇಲ್ಲೊಕ್ಕೆಲ್ ಚಿತ್ರದ ಎಲ್ಲ ಹಾಡುಗಳ ರೆಕಾರ್ಡಿಂಗ್ ಚೆನೈನಲ್ಲಿ ನಡೆದಿದ್ದು,  ಮೊದಲ ಬಾರಿಗೆ ಕಾಲಿವುಡ್ ನ ಪ್ರಸಿದ್ಧ ಗಾಯಕ ಟಿಪ್ಪು ಅವರು ತುಳು ಚಿತ್ರದಲ್ಲಿ ಹಾಡಿದ್ದಾರೆ. ಮೈಂ ರಾಮದಾಸ್ ಮತ್ತು ಡಾ. ಸುರೇಶ್ ಯಸ್ ಕೋಟ್ಯಾನ್ ಚಿತ್ರಾಪು ಅವರು ಕೂಡ ಈ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.  ಮಂಗಳೂರು ಪಣಂಬೂರು ಬೀಚ್ ಫೆಸ್ಟಿವಲ್ ನ ವಿನ್ನರ್ ರಕ್ಷಿತಾ ಅವರು ಕೂಡ ಒಂದು ಹಾಡನ್ನು ಹಾಡಿರುತ್ತಾರೆ. ರಾಜ್ ಷಾ ಅವರು ಸಂಗೀತ ನೀಡಿದ್ದು. ಸುರೇಶ್ ವಿನ್ಯಾಸ್ ಹಿನ್ನಲೆ ಸಂಗೀತ ನೀಡಿರುತ್ತಾರೆ.tulu chitrarangadalli modala barige 5d technology

Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com


ಈ ಸಿನಿಮಾದಲ್ಲಿ ಕೋಸ್ಟಲ್ ವುಡ್ನ ಅಗ್ರಮಾನ್ಯ ಕಲಾವಿದರಾದ ಕುಸಲ್ದರಸೆ ನವೀನ್.ಡಿ.ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ನವರಸ ರಾಜೆ ಭೋಜರಾಜ್ ವಾಮಂಜೂರ್, ಸ್ಯಾಂಡಲ್ ವುಡ್ ನ ಅದ್ವಿತಿ ಶೆಟ್ಟಿ ಪ್ರಪ್ರಥಮವಾಗಿ ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ಅಭಿನಯಿಸುತ್ತಿದ್ದಾರೆ, ಅಪ್ಪೆ ಟೀಚರ್ ಖ್ಯಾತಿಯ ನಿರೀಕ್ಷ ಶೆಟ್ಟಿ, ಭವ್ಯ ಗೌಡ, ವಿಸ್ಮಯ ವಿನಾಯಕ್, ವಿಜೆ ವಿನೀತ್, ಪಿಲಿಬೈಲು ಯಮುನಕ್ಕ ಖ್ಯಾತಿಯ ಚಂದ್ರಕಲಾ ಮೋಹನ್, ಸೀತರಾಮ್ ಕಟೀಲು ಮತ್ತು ಇನ್ನು ಅನೇಕ ಖ್ಯಾತ ಕಲಾವಿದರು ನಟಿಸಿದ್ದಾರೆ. ವಿಶಿಷ್ಟ ಪಾತ್ರದಲ್ಲಿ ಸ್ಯಾಂಡಲ್ ವುಡ್ನ ಹಾಸ್ಯ ಕಲಾವಿದರಾದ ಕುರಿಬಾಂಡ್ ರಂಗ ಅಭಿನಯಿಸಿದ್ದು ಇವರು ಪ್ರಥಮ ಬಾರಿಗೆ ಕೋಸ್ಟಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಈ ಸಿನೆಮಾವು ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿದೆ, ಇಲ್ಲ್ ಒಕ್ಕೆಲ್ ಗೆ ಡಾ.ಸುರೇಶ್ ಯಸ್ ಕೋಟ್ಯಾನ್ ಚಿತ್ರಾಪು ಅವರ ನಿರ್ದೇಶನವಿದ್ದು, ವಾಸುದೇವ ಯಸ್ ಚಿತ್ರಾಪು ಮತ್ತು ಡಿ. ಯಂ ಶೆಟ್ಟಿ ಇವರು  ನಿರ್ಮಾಪಕರಾಗಿದ್ದಾರೆ.

ಈ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಡಿಸೆಂಬರ್ 6 ರಿಂದ ಮುಲ್ಕಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯಲಿದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com